ಮಗುವಿಗೆ ಎದೆಹಾಲುಣಿಸುವಾಗ ಇಂತಹ ಹಣ್ಣುಗಳಿಂದ ಆದಷ್ಟು ದೂರವಿರಿ


ಗರ್ಭಾವಸ್ಥೆ ಎಂಬುದು ಹೆಣ್ಣಿಗೆ ಹೇಗೆ ತಾಯ್ತನದ ಅನುರಾಗವನ್ನು ಮೂಡಿಸುತ್ತದೆಯೋ ಅಂತೆಯೇ ಮಗುವನ್ನು ಹೆತ್ತ ನಂತರ ಅದಕ್ಕೆ ಹಾಲೂಡಿಸುವ ಪ್ರಕ್ರಿಯೆಯಲ್ಲಿ ಕೂಡ ಅಷ್ಟೇ ಕಾಳಜಿಯನ್ನು ಮಾಡಬೇಕಾಗುತ್ತದೆ.

ತಾಯ ಗರ್ಭದಿಂದ ಹೊರಬಂದು ಬಾಹ್ಯ ಪ್ರಪಂಚಕ್ಕೆ ಕಾಲಿಟ್ಟ ಕಂದಮ್ಮ ತನ್ನ ತಾಯಿಯ ಎದೆಹಾಲನ್ನೇ ಅವಲಂಬಿಸಿರುತ್ತದೆ. ಅದಕ್ಕಾಗಿಯೇ ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾಗಿರುತ್ತದೆ. ನೀವು ತಿನ್ನುವ ಆಹಾರವೇ ಎದೆಹಾಲನ್ನು ಪೂರೈಸುವ ಪ್ರಮುಖ ಸಾಧನ ಎಂದೆನಿಸಿದ್ದು ನಿಮ್ಮ ಮಗುವಿಗೆ ಪೂರೈಕೆಯಾಗುವ ಆಹಾರ ತಾಯಿ ತಿನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಆಕೆ ಕಂಡುಕೊಳ್ಳಬೇಕು.

ಎದೆ ಹಾಲನ್ನು ಹೆಚ್ಚಿಸುವ 10 ಮನೆಮದ್ದುಗಳು

ನಿಮ್ಮ ಮಗುವನ್ನು ಸುದೃಢವಾಗಿಸಲು ನಿಮ್ಮ ಎದೆಹಾಲು ಅತಿಮುಖ್ಯವಾಗಿರುತ್ತದೆ. ಆದ್ದರಿಂದ ತಾಯಿ ಸೇವಿಸುವ ಆಹಾರ ಹೆಚ್ಚು ಪೋಷಕಾಂಶ ಭರಿತವಾಗಿರಬೇಕಾಗಿರುವುದರಿಂದ ಆಹಾರದ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿಯಾಗಿರಬೇಕು.

ಪರಿಣಿತರು ಹೇಳುವಂತೆ ಕೆಳಗಿನ ಆಹಾರಗಳನ್ನು ಅವರುಗಳು ಸೇವಿಸಿದಲ್ಲಿ, ಹಾಲನ್ನು ಕಮಟು ವಾಸನೆಯಿಂದ ಕೂಡಿರುವಂತೆ ಮಾಡುತ್ತದೆ. ಆಹಾರಗಳಲ್ಲಿರುವ ಆಸಿಡ್ಸ್ ಎದೆಹಾಲಿನೊಂದಿಗೆ ಮಿಶ್ರಗೊಂಡು ಇದನ್ನು ಕಮಟಾಗಿಸುತ್ತದೆ. ಎದೆ ಹಾಲೆಂಬ ಅಮೃತದಲ್ಲಿದೆ ಅತ್ಯುನ್ನತ ಪೋಷಕಾಂಶಗಳು

ನಿಮ್ಮ ಮಗುವಿಗೆ ಸ್ತನ್ಯಪಾನ ಮಾಡಿಸುವಾಗ ಕಿತ್ತಳೆ, ಅನಾನಸ್ ಮತ್ತು ಪೈನಾಪಲ್ಗಳನ್ನು ನೀವು ಆದಷ್ಟು ಸೇವಿಸುವಂತಿಲ್ಲ. ಹಾಲುಣಿಸಿದ ನಂತರ ಮಗು ಜೋರಾಗಿ ಅಳುವುದು, ಬಣ್ಣದಲ್ಲಿ ಬದಲಾವಣೆ ಮತ್ತು ಹಾಲುಣಿಸಲು ಮಗು ಅಡ್ಡಿಪಡಿಸುವುದು ಇತರೆ ಲಕ್ಷಣಗಳು ಕಂಡುಬಂದಲ್ಲಿ ನಿಮ್ಮ ಎದೆಹಾಲಿನಿಂದ ಮುವಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದೇ ಅರ್ಥ. ಹಾಗಿದ್ದರೆ ಇಂದಿನ ಲೇಖನದಲ್ಲಿ ಗರ್ಭಿಣಿಯರು ಸೇವಿಸಲೇ ಬಾರದ ಹಣ್ಣುಗಳ ವಿವರಗಳನ್ನು ನಾವು ನೀಡುತ್ತಿದ್ದು ಇತ್ತ ಗಮನ ಹರಿಸಿ.

ಸಿಟ್ರಸ್ ಹಣ್ಣುಗಳು:
ಸಿಟ್ರಸ್ ಅಂಶ ಇರುವಂತಹ ಹಣ್ಣುಗಳು ಮಗುವಿನ ಹೊಟ್ಟೆಯಲ್ಲಿ ತೊಂದರೆಯನ್ನುಂಟು ಮಾಡಬಹುದು. ಕಿತ್ತಳೆ, ದ್ರಾಕ್ಷಿ, ಲಿಂಬೆ, ಹೀಗೆ ವಿಟಮಿನ್ ಸಿ ಅಂಶಗಳನ್ನು ಹೊಂದಿರುವ ಹಣ್ಣುಗಳನ್ನು ಸೇವಿಸದಿರಿ.

ಸ್ಟ್ರಾಬೆರ್ರಿ
:
ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಹೆಚ್ಚು ಸ್ಟ್ರಾಬೆರ್ರಿಯನ್ನು ಸೇವಿಸುವುದು ಮಗುವಿಗೆ ತೀವ್ರ ಸೋಂಕನ್ನು ಉಂಟುಮಾಡುತ್ತದೆ. ಗ್ಯಾಸ್ ರಚನೆ, ಅತಿಸಾರ, ಫಿಸಿನೆಸ್, ಕೆಲವು ಮಕ್ಕಳಲ್ಲಿ ಚರ್ಮ ರೋಗಗಳು ಉಂಟಾಗು ಸಾಧ್ಯತೆ ಇರುತ್ತದೆ. ಹಣ್ಣುಗಳನ್ನು ಸೇವಿಸದೇ ಇರುವುದು ಒಳ್ಳೆಯದು.

ಪೈನಾಪಲ್:
ಪೈನಾಪಲ್ ಆಸಿಡ್ ಅಂಶವನ್ನು ಹೊಂದಿರುವುದರಿಂದ ಇದು ಎದೆಹಾಲನ್ನು ಕಟುವಾಗಿಸುತ್ತದೆ, ಇದು ಮಗುವಿಗೆ ಕೆಂಪು ಗುಳ್ಳೆಗಳನ್ನು ಉಂಟುಮಾಡುತ್ತದೆ.

ಕಿವಿ:
ಮಗುವಿಗೆ ಎದೆಹಾಲು ಉಣಿಸುತ್ತಿರುವ ಸಂದರ್ಭದಲ್ಲಿ ಹೆಚ್ಚು ಕಿವಿ ಹಣ್ಣು ಸೇವಿಸುವುದು ಮಗುವಿಗೆ ಆರೋಗ್ಯಕಾರಿಯಲ್ಲ. ಹಣ್ಣಿನಲ್ಲಿರುವ ಅಂಶಗಳು ಮಗುವಿನಲ್ಲಿ ಗ್ಯಾಸ್ ಅನ್ನು ಉತ್ಪತ್ತಿ ಮಾಡಿ ಕರುಳಿನ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಚೆರ್ರಿ:
ಹೆಚ್ಚು ಚೆರ್ರಿ ಸೇವನೆ ಕೂಡ ಸಮಸ್ಯೆಯನ್ನು ಉಂಟುಮಾಡಬಹುದು. ಇದು ನೈಸರ್ಗಿಕ ಲ್ಯಾಕ್ಸಟೀವ್ ಅನ್ನು ಒಳಗೊಂಡಿರುತ್ತದೆ. ನವಜಾತ ಶಿಶುವಿಗೆ ಎದೆಹಾಲುಣಿಸುತ್ತಿರುವಾಗ ಚೆರ್ರಿ ಸೇವನೆಯನ್ನು ಮಾಡಬೇಡಿ.

ಒಣದ್ರಾಕ್ಷಿ:
ನಿಮ್ಮ ಮಗುವಿಗೆ ಆಗಾಗ್ಗೆ ಡಯಾಪರ್ ಬದಲಾಯಿಸುವ ಸಮಸ್ಯೆಯನ್ನು ಒಣದ್ರಾಕ್ಷಿ ಉಂಟುಮಾಡುತ್ತದೆ. ನೀವು ಇದು ಹೆಚ್ಚು ತಿನ್ನುತ್ತಿದ್ದೀರಿ ಎಂದಾದಲ್ಲಿ ಅದನ್ನು ಬಿಡಿ.

ಸೇಬಿನ
ಹಣ್ಣು:
ಸೇಬಿನ ಹಣ್ಣುಗಳನ್ನು ಸೇವಿಸಲು ಉತ್ತಮವೇ ಆದರೆ ಹಾಲುಣಿಸುತ್ತಿರುವಾಗ ಹಣ್ಣನ್ನು ಸೇವಿಸಬಾರದು ಎಂಬುದಾಗಿ ವೈದ್ಯರು ಶಿಫಾರಸು ಮಾಡುತ್ತಾರೆ. ಆಪಲ್ನಲ್ಲಿರುವ ನಾರಿನಂಶ ಮಗುವಿಗೆ ಮಲಬದ್ಧತೆಯನ್ನು ಉಂಟುಮಾಡಬಹುದು.